ಪ್ರಶಾಂತ್ ನೀಲ್ (ಜನನ 4 ಜೂನ್ 1980) ರವರು ಕನ್ನಡ ಚಿತ್ರರಂಗದಲ್ಲಿ ಕೆಲಸಮಾಡುವ ಚಲನಚಿತ್ರ ನಿರ್ದೇಶಕರು. ಶ್ರೀ ಮುರುಳಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಉಗ್ರಂ ಎಂಬ ಚಲನಚಿತ್ರವನ್ನ ನಿರ್ದೇಶಸಿಸುವ ಮೂಲಕ ಕನ್ನಡ ಚಲನಚಿತ್ರ ರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು. ಈ ಚಲನಚಿತ್ರವು ಬ್ಲಾಕ್ ಬಾಸ್ಟರ್ ಸಿನಿಮಾ ಆಗಿ ಹೊರಹೊಮ್ಮಿತು. ನಂತರ 2018ರಲ್ಲಿ ಬಿಡುಗಡೆಯಾದ ಕೆ.ಜಿ.ಎಫ್: ಅಧ್ಯಾಯ 1 ಚಿತ್ರವನ್ನು ನಿರ್ದೇಶಿಸಿದರು. ಈ ಚಲನಚಿತ್ರವನ್ನು ಕನ್ನಡ ಭಾಷೆ ಮಾತ್ರವಲ್ಲದೆ ಹಿಂದಿ, ತಮಿಳು, ಮಲಯಾಳಂ, ತೆಲುಗು ಭಾಷೆಗಳಲ್ಲಿ ಡಬ್ ಮಾಡಿದ್ದಾರೆ.ಕೆ.ಜಿ.ಎಫ್: ಅಧ್ಯಾಯ 1 ಸುಮಾರು ಪ್ರಶಾಂತ್ ನೀಲ್ ಅವರಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿತು. == ವೃತ್ತಿ ಜೀವನ == ನೀಲ್ ರವರು ಶ್ರೀಮುರುಳಿ ಮತ್ತು ಹರಿಪ್ರಿಯಾ ನಟಿಸಿರುವ ಉಗ್ರಂ ಎಂಬ ಆಕ್ಷನ್ ಚಲನಚಿತ್ರವನ್ನು ನಿರ್ದೇಶಿಸಿದರು. ಈ ಚಲನಚಿತ್ರವು ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಯಶಸ್ಸನ್ನು ಗಳಿಸಿತು. ನಂತರ ರಾಕಿಂಗ್ ಸ್ಟಾರ್ ಯಶ್ ಮತ್ತು ಶ್ರೀನಿಧಿ ಶೆಟ್ಟಿ ನಟಿಸಿರುವ ಕೆ.ಜಿ.ಎಫ್: ಅಧ್ಯಾಯ 1 ಚಲನಚಿತ್ರವನ್ನು ನಿರ್ದೇಶಿಸಿದ್ದಾರೆ. ೨೦೧೮ರಲ್ಲಿ ತೆರೆಗೆ ಬಂದ ಈ ಚಲನಚಿತ್ರ ಒಂದೇ ಸಮಯದಲ್ಲಿ ಐದು ಭಾಷೆಯಲ್ಲಿ ಬಿಡುಗೊಡೆಗೊಂಡಿದೆ. ಅವರ ಮುಂದಿನ ಚಲನಚಿತ್ರ ಕೆ.ಜಿ.ಎಫ್ ಅಧ್ಯಾಯ-೨. ಇವರು ಆಂದ್ರಪ್ರದೇಶದ ದಲ್ಲಿ ಇರುವ ಅನಂತಪುರಂ ಜಿಲ್ಲೆಯ ದವರು ನೀಲಕಾಂಟ ಪುರಂ ಗ್ರಾಮದವರು == ಫಿಲ್ಮೋಗ್ರಾಫಿ == == ಪ್ರಶಸ್ತಿ ಮತ್ತು ನಾಮನಿರ್ದೇಶನ == == ಉಲ್ಲೇಖಗಳು ==